ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೨, ವಾರ ೪೨ (ಸೋಮವಾರ ೧೭ ಅಕ್ಟೋಬರ್ ೨೦೨೨) | ಮುಂದಿನ |
ತಾಂತ್ರಿಕ ಸುದ್ದಿ: 2022-42
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಇತ್ತೀಚೆಗೆ ಅಳವಡಿಸಲಾದ ವೈಶಿಷ್ಟ್ಯ Special:Search ನಲ್ಲಿ ಲೇಖನದ ಥಂಬ್ನೇಲ್ಗಳು ವಿಕಿಪೀಡಿಯಾ ಯೋಜನೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಹೆಚ್ಚಿನ ವಿವರಗಳು T320510 ನಲ್ಲಿವೆ. [೧]
- Special:Search ನಲ್ಲಿ ಲೇಖನ ಥಂಬ್ನೇಲ್ಗಳನ್ನು ಲೋಡ್ ಮಾಡುವಲ್ಲಿ ಸಮಸ್ಯೆಗಳನ್ನು ಉಂಟುಮಾಡಿದ ದೋಷವನ್ನು ಸರಿಪಡಿಸಲಾಗಿದೆ. ಹೆಚ್ಚಿನ ವಿವರಗಳು T320406 ನಲ್ಲಿವೆ.
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೧೮ ಅಕ್ಟೋಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೯ ಅಕ್ಟೋಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೦ ಅಕ್ಟೋಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- Lua ಮಾಡ್ಯೂಲ್ ಲೇಖಕರು JSON ಪುಟಗಳಿಂದ ಡೇಟಾವನ್ನು ಲೋಡ್ ಮಾಡಲು
mw.loadJsonData()
ಅನ್ನು ಬಳಸಬಹುದು. [೨] - Lua ಮಾಡ್ಯೂಲ್ ಲೇಖಕರು ಕೆಲವು ಸಂಭವನೀಯ ಕೋಡ್ ಸಮಸ್ಯೆಗಳಿಗೆ ದೋಷಗಳನ್ನು ಸೇರಿಸಲು
require( "strict" )
ಅನ್ನು ಸಕ್ರಿಯಗೊಳಿಸಬಹುದು. ಇದು ಹೆಚ್ಚಿನ ವಿಕಿಗಳಲ್ಲಿ "ಮಾಡ್ಯೂಲ್:No globals" ಅನ್ನು ಬದಲಿಸುತ್ತದೆ. [೩]
ಭವಿಷ್ಯದ ಬದಲಾವಣೆಗಳು
- ಚರ್ಚಾ ಪರಿಕರಗಳಿಗಾಗಿ ಬೀಟಾ ವೈಶಿಷ್ಟ್ಯವನ್ನು ಹೆಚ್ಚಿನ ವಿಕಿಗಳಲ್ಲಿ ನವೀಕರಿಸಲಾಗುತ್ತದೆ. ಈ ಬದಲಾವಣೆಯ ನಂತರ "reply" ಬಟನ್ ವಿಭಿನ್ನವಾಗಿ ಕಾಣುತ್ತದೆ. [೪]
ಟೆಕ್ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ