ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೨, ವಾರ ೫೦ (ಸೋಮವಾರ ೧೨ ಡಿಸೆಂಬರ್ ೨೦೨೨) | ಮುಂದಿನ |
ತಾಂತ್ರಿಕ ಸುದ್ದಿ: 2022-50
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಮೊಬೈಲ್ನಲ್ಲಿನ ಚರ್ಚಾ ಪುಟಗಳ ಯೋಜನೆಗಾಗಿ 15 ವಿಕಿಪೀಡಿಯಾಗಳಲ್ಲಿ ಪ್ರಾಥಮಿಕ ಪರೀಕ್ಷೆಯು ಪ್ರಾರಂಭವಾಗಿದೆ. ಮೊಬೈಲ್ ವೆಬ್ ಸೈಟ್ನಲ್ಲಿ ಅರ್ಧದಷ್ಟು ಸಂಪಾದಕರು Reply ಟೂಲ್ ಮತ್ತು ಇತರ ವೈಶಿಷ್ಟ್ಯಗಳಿಗೆ ಬಳಸುವ ಸಾಮರ್ಥ್ಯ ಹೊಂದಿರುತ್ತಾರೆ. [೧]
- ಟೆಂಪ್ಲೇಟ್ಗಳೊಂದಿಗೆ ಬಳಕೆದಾರಹೆಸರುಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡಲು
=
ಅಕ್ಷರವನ್ನು ಹೊಸ ಬಳಕೆದಾರರ ಹೆಸರುಗಳಲ್ಲಿ ಬಳಸಲಾಗುವುದಿಲ್ಲ. ಅಸ್ತಿತ್ವದಲ್ಲಿರುವ ಬಳಕೆದಾರರ ಹೆಸರುಗಳಿಗೆ ಈ ನಿರ್ಬಂಧ ಪರಿಣಾಮ ಬೀರುವುದಿಲ್ಲ. [೨]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೧೩ ಡಿಸೆಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೪ ಡಿಸೆಂಬರ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧೫ ಡಿಸೆಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- ಚರ್ಚಾ ಪರಿಕರಗಳಿಂದ ವಿಭಾಗದ ಶೀರ್ಷಿಕೆಗಳ ಕೆಳಗೆ ಚರ್ಚೆಯ ಮೆಟಾಡೇಟಾವನ್ನು ತೋರಿಸಲು ಬಳಸುವ HTML ಮಾರ್ಕ್ಅಪ್ ಅನ್ನು ಈ ಶೀರ್ಷಿಕೆಗಳ ನಂತರ ಸೇರಿಸಲಾಗುತ್ತದೆ, ಅವುಗಳ ಒಳಗೆ ಅಲ್ಲ. ಈ ಬದಲಾವಣೆಯು ಸ್ಕ್ರೀನ್ ರೀಡರ್ ಸಾಫ್ಟ್ವೇರ್ಗಾಗಿ ಚರ್ಚಾ ಪುಟಗಳ ಬಳಸುವ ಸಾಮರ್ಥ್ಯ ಸುಧಾರಿಸುತ್ತದೆ. [೩]
ಕಾರ್ಯಕ್ರಮಗಳು
- ಕೂಲೆಸ್ಟ್ ಟೂಲ್ ಅವಾರ್ಡ್ನ ನಾಲ್ಕನೇ ಆವೃತ್ತಿಯು ಆನ್ಲೈನ್ನಲ್ಲಿ ಶುಕ್ರವಾರ 16 ಡಿಸೆಂಬರ್ 2022 ರಂದು 17:00 UTC ಕ್ಕೆ ನಡೆಯಲಿದೆ! ಈವೆಂಟ್ ಅನ್ನು YouTube ನಲ್ಲಿ ಮೀಡಿಯಾವಿಕಿ ಚಾನಲ್ ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ ಮತ್ತು ಕಾಮನ್ಸ್ಗೆ ಸೇರಿಸಲಾಗುವುದು.
ಟೆಕ್ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.