ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೧೦ (ಸೋಮವಾರ ೦೬ ಮಾರ್ಚ್ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-10
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಸಮುದಾಯ ಬಯಕೆಪಟ್ಟಿ ಸಮೀಕ್ಷೆ 2023 ಆವೃತ್ತಿಯನ್ನು ಮುಕ್ತಾಯಗೊಳಿಸಲಾಗಿದೆ. ಸಮುದಾಯ ತಾಂತ್ರಿಕ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ ಮತ್ತು ಏಪ್ರಿಲ್ 2023 ರಲ್ಲಿ ಮುಂದಿನ ಕ್ರಮ ಪ್ರಸ್ತುತಪಡಿಸಲಾಗುವುದು.
- ಬಹು ಬರವಣಿಗೆ ವ್ಯವಸ್ಥೆಗಳನ್ನು ನಿರ್ವಹಿಸಲು LanguageConverter ಬಳಸುವ ವಿಕಿಗಳಲ್ಲಿ, ವಿಕಿಟೆಕ್ಸ್ಟ್ನಲ್ಲಿ (ಪ್ರಾಥಮಿಕವಾಗಿ ಚೈನೀಸ್ ವಿಕಿಪೀಡಿಯಾದಲ್ಲಿ) ಕಸ್ಟಮ್ ಪರಿವರ್ತನೆ ನಿಯಮಗಳನ್ನು ಬಳಸಿದ ಲೇಖನಗಳು ಈ ನಿಯಮಗಳನ್ನು ವಿಷಯಗಳ ಕೋಷ್ಟಕದಲ್ಲಿ ಅಸಮಂಜಸವಾಗಿರುತ್ತಿತ್ತು, ವಿಶೇಷವಾಗಿ ವೆಕ್ಟರ್ 2022 ಸ್ಕಿನ್ ನಲ್ಲಿ. ಇದನ್ನು ಈಗ ಸರಿಪಡಿಸಲಾಗಿದೆ. [೧]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೭ ಮಾರ್ಚ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೮ ಮಾರ್ಚ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೯ ಮಾರ್ಚ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- ಪ್ರಾಶಸ್ತ್ಯಗಳ ಪರದೆಗೆ ಹುಡುಕಾಟ ವ್ಯವಸ್ಥೆಯನ್ನು ಸೇರಿಸಲಾಗಿದೆ. ಇದು ವಿಭಿನ್ನ ಆಯ್ಕೆಗಳನ್ನು ಹೆಚ್ಚು ಸುಲಭವಾಗಿ ಹುಡುಕಲು ನಿಮಗೆ ಅನುಮತಿಸುತ್ತದೆ. ಶೀಘ್ರದಲ್ಲೇ ಮೊಬೈಲ್ ಸಾಧನಗಳಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು. [೨]
ಟೆಕ್ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.