ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೩೮ (ಸೋಮವಾರ ೧೮ ಸೆಪ್ಟೆಂಬರ್ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-38
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಮೀಡಿಯಾವಿಕಿಯು ಈಗ ಫ್ರಂಟೆಂಡ್ ಕೋಡ್ಗಾಗಿ ಸ್ಥಿರವಾದ ಇಂಟರ್ಫೇಸ್ ನೀತಿಯನ್ನು ಹೊಂದಿದೆ ಅದು ನಾವು ಮೀಡಿಯಾವಿಕಿ ಕೋಡ್ ಮತ್ತು ವಿಕಿ-ಆಧಾರಿತ ಕೋಡ್ ಅನ್ನು ಹೇಗೆ ಅಸಮ್ಮತಿಸುತ್ತೇವೆ (ಉದಾ. ಗ್ಯಾಜೆಟ್ಗಳು ಮತ್ತು ಬಳಕೆದಾರ ಸ್ಕ್ರಿಪ್ಟ್ಗಳು) ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ವಿವರಿಸುತ್ತದೆ. ವಿಷಯ ಮತ್ತು ಚರ್ಚೆಗಳಿಗೆ ಕೊಡುಗೆ ನೀಡಿದ ಎಲ್ಲರಿಗೂ ಧನ್ಯವಾದಗಳು. [೧][೨]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೧೯ ಸೆಪ್ಟಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೦ ಸೆಪ್ಟಂಬರ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೧ ಸೆಪ್ಟಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ನಿಯೋಜಿಸಲಾಗುವುದು.
- ಸೆಪ್ಟೆಂಬರ್ ೨೦ ರಂದು ಎಲ್ಲಾ ವಿಕಿಗಳನ್ನು ಕೆಲವು ನಿಮಿಷಗಳವರೆಗೆ ಓದಲು-ಮಾತ್ರ ಮಾಡಲಾಗುತ್ತದೆ. ಇದು ೧೪:೦೦ UTC ಸಮಯಕ್ಕೆ ಯೋಜಿಸಲಾಗಿದೆ. [೩]
- Wikimedia URL Shortener ಬಳಸಿಕೊಂಡು ಆ ಪುಟದ ಸಣ್ಣ URL ಅನ್ನು ಒದಗಿಸುವ ಲಿಂಕ್ಅನ್ನು ಸೈಡ್ಬಾರ್ನಲ್ಲಿ ಎಲ್ಲಾ ವಿಕಿಗಳು ಹೊಂದಿರುತ್ತವೆ. [೪]
ಭವಿಷ್ಯದ ಬದಲಾವಣೆಗಳು
- ಗ್ರಾಫ್ ವಿಸ್ತರಣೆಯನ್ನು ತನಿಖೆ ಮಾಡುವ ತಂಡವು ಅದನ್ನು ಮರುಸಕ್ರಿಯಗೊಳಿಸುವ ಪ್ರಸ್ತಾಪವನ್ನು ಪೋಸ್ಟ್ ಮಾಡಿದೆ ಮತ್ತು ಆ ತಂಡಕ್ಕೆ ನಿಮ್ಮ ಪ್ರತಿಕ್ರಿಯೆ ಅಗತ್ಯವಿದೆ.
ತಾಂತ್ರಿಕ ಸುದ್ದಿಯನ್ನು ತಾಂತ್ರಿಕ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಸಂದೇಶ ರವಾನೆ ಮಾಡಲಾಗುತ್ತದೆ • ಯೋಜನೆಯಲ್ಲಿ ತೊಡಗಿಸಿಕೊಳ್ಳಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.