Tech/Server switch 2016/kn
ವಿಕಿಮೀಡಿಯಾ ಸಂಸ್ಥೆಯು ಡಲ್ಲಾಸ್ ನಲ್ಲಿ ಇರುವ ತನ್ನ ಹೊಚ್ಚ ಹೊಸ ಡಾಟಾ ಕೇಂದ್ರವನ್ನು ಪರೀಕ್ಷಿಸಲಿದೆ. ಇದು ವಿಕಿಪೀಡಿಯಾ ಮತ್ತು ಇತರೆ ವಿಕಿಮೀಡಿಯಾ ವಿಕಿಗಳು ವಿಕೋಪಗಳ ನಂತರವೂ ಆನ್ಲೈನ್ ನಲ್ಲಿ ಇರುವವೆಂದು ಖಚಿತಪಡಿಸುತ್ತದೆ. ಎಲ್ಲವೂ ಕೆಲಸ ಮಾಡುತ್ತಿದೆ ಎಂದು ಖಾತ್ರಿಪಡಿಸಲು, ವಿಕಿಮೀಡಿಯಾದ ತಾಂತ್ರಿಕ ಇಲಾಖೆ ಒಂದು ವ್ಯವಸ್ಥಿತ ಪರೀಕ್ಷೆ ಮಾಡಬೇಕಿದೆ.
ಮಂಗಳವಾರ, ೧೯ ಏಪ್ರಿಲ್ ನಂದು ಅವು ಎಲ್ಲಾ ಸಂಚಾರವನ್ನು ಹೊಸ ಡಾಟಾ ಕೇಂದ್ರಕ್ಕೆ ವರ್ಗವಾಗುವವು.
ಗುರುವಾರ, ೨೧ ಏಪ್ರಿಲ್ ನಂದು, ಅವು ಮೂಲ ಡಾಟಾ ಕೇಂದ್ರಕ್ಕೆ ಹಿಂಬರುವವು.
ದುರಾದೃಷ್ಟವಂತೆ, ಮೀಡಿಯಾ ವಿಕಿಯಲ್ಲಿನ ಕೆಲ ಮಿತಿಗಳಿಂದಾಗಿ, ಈ ವರ್ಗಾವಣೆಗಳ ಮಧ್ಯೆ ಎಲ್ಲಾ ಸಂಪಾದನೆಗಳು ನಿಲ್ಲಬೇಕಾಗಿದೆ. ಈ ಅಡ್ಡಿಗಾಗಿ ನಾವು ಕ್ಷಮೆ ಕೋರುತ್ತೇವೆ, ಮತ್ತು ಭವಿಷ್ಯದಲ್ಲಿ ಇದನ್ನು ಕಡಿಮೆಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ.
ನೀವು ಈ ಸಣ್ಣ ಸಮಯದಲ್ಲಿ ಎಲ್ಲಾ ವಿಕಿಗಳನ್ನು ಓದಬಹುದು, ಆದರೆ ಸಂಪಾದಿಸಲು ಸಾಧ್ಯವಿಲ್ಲ.
- ನೀವು ೧೯ ಏಪ್ರಿಲ್ ಮತ್ತು ೨೧ ಏಪ್ರಿಲ್ ಮಧ್ಯಾಹ್ನ ೨ ಗಂಟೆಯಿಂದ(ಸಾರ್ವತ್ರಿಕ ಸಮಯ ವಲಯ) ೧೫ ರಿಂದ ೩೦ ನಿಮಿಷ ಸಂಪಾದಿಸಲು ಸಾಧ್ಯವಿಲ್ಲ.
- ನೀವು ಈ ಸಮಯದಲ್ಲಿ ಸಂಪಾದನೆ ಅಥವಾ ಉಳಿಸಲು ಪ್ರಯತ್ನಿಸಿದ್ದಲ್ಲಿ, ನಿಮಗೆ ಒಂದು ದೋಷ ಸಂದೇಶ ಗೋಚರವಾಗುವುದು. ನಾವು ಈ ಸಮಯದಲ್ಲಿ ಯಾವ ಸಂಪಾದನೆಯೂ ಅಳಿಸಿ ಹೋಗಲು ಆಶಿಸುವುದಿಲ್ಲ, ಆದರೆ ನಾವು ಇದನ್ನು ಖಚಿತಪಡಿಸಲಾಗುವುದಿಲ್ಲ. ನೀವು ದೋಷ ಸಂದೇಶ ಕಂಡರೆ, ದಯವಿಟ್ಟು ಎಲ್ಲಾ ಸಾಮಾನ್ಯವಾಗುವವರೆಗೆ ಕಾಯಿರಿ. ಆವಾಗ ನೀವು ನಿಮ್ಮ ಸಂಪಾದನೆ ಉಳಿಸಬಹುದು. ಆದರೆ, ನಾವು ನಿಮ್ಮ ಬದಲಾವಣೆಗಳ ಒಂದು ಪ್ರತಿಯನ್ನು ಉಳಿಸಿಕೊಳ್ಳಲು ಒತ್ತಾಯಿಸುತ್ತೇವೆ.
"ಇತರೆ ಪರಿಣಾಮಗಳು:"
- ಹಿಂಬದಿಯ ಕಾರ್ಯಗಳು ನಿಧಾನವಾಗಿರುವವು ಮತ್ತು ಕೆಲವನ್ನು ಕೈ ಬಿಡಲಾಗುವುದು. ಕೆಂಪು ಕೊಂಡಿಗಳು ಸಾಮಾನ್ಯದಂತೆ ತಕ್ಷಣ ಅಪ್ಡೇಟ್ ಆಗದೆ ಇರಬಹುದು. ನೀವು ಯಾವುದೇ ಬೇರೆಡೆ ಕೊಂಡಿ ಹೊಂದಿದ ಲೇಖನ ಸೃಷ್ಟಿಸಿದರೆ, ಆ ಕೊಂಡಿ ಸಹಜಕ್ಕಿಂತ ಹೆಚ್ಚು ಕಾಲ ಕೆಂಪು ಉಳಿಯುವುದು. ಕೆಲ ಉದ್ದ-ಓಡುವ ಸ್ಕ್ರಿಪ್ಟ್ ಗಳು ನಿಲ್ಲಿಸಬೇಕಾಗುವುದು.
- ಏಪ್ರಿಲ್ ೧೮ ರ ವಾರದಂದು ಕೋಡ್ ಹಿಡಿದಿಡಲಾಗುವುದು. ಯಾವುದೆ ಅವಶ್ಯವಲ್ಲದ ಕೋಡ್ ನಿಯೋಜನೆ ನಡೆಯುವುದಿಲ್ಲ.
ಈ ಪರೀಕ್ಷೆ ಮುಂಚಿತವಾಗಿ ಮಾರ್ಚ್ ೨೨ ರಂದು ನಡೆಸಲು ಯೋಜಿಸಲಾಗಿತ್ತು. ಏಪ್ರಿಲ್ ೧೯ ಮತ್ತು ೨೧ ಹೊಸ ದಿನಗಳಾಗಿವೆ. ನೀವು ವೇಳಾಪಟ್ಟಿ ಇಲ್ಲಿ ಓದಬಹುದಾಗಿದೆ wikitech.wikimedia.org ವೇಳಾಪಟ್ಟಿಯಲ್ಲಿನ ಯಾವುದೆ ಬದಲಾವಣೆಗಳನ್ನು ಅಲ್ಲಿ ಸೂಚಿಸಲಾಗುವುದು. ಇದರ ಬಗ್ಗೆ ಇನ್ನೂ ಹೆಚ್ಚು ಅಧಿಸೂಚನೆಗಳಿರುವವು. ದಯವಿಟ್ಟು ಈ ಸುದ್ದಿಯನ್ನು ನಿಮ್ಮ ಸಮುದಾಯದೋಡನೆ ಹಂಚಿಕೊಳ್ಳಿ. /User:Whatamidoing (WMF) (talk)