ವಿಕಿಮೀಡಿಯಾ ವಿಕಿಮೀಟ್ ಇಂಡಿಯಾ ೨೦೨೧
ವಿಕಿಮೀಡಿಯಾ ವಿಕಿಮೀಟ್ ಇಂಡಿಯಾ ೨೦೨೧ | |
---|---|
Status | ಯೋಜಿಸಲಾಗುತ್ತಿದೆ |
Begins | ೧೯ ಫೆಬ್ರವರಿ ೨೦೨೧ |
Ends | ೨೧ ಫೆಬ್ರವರಿ ೨೦೨೧ |
Frequency | ಮೊದಲ ಪುನರಾವರ್ತನೆ |
Location(s) | ಆನ್‌ಲೈನ್ (ವೇದಿಕೆಯನ್ನು ಘೋಷಿಸಲಾಗುವುದು) |
Country | ವರ್ಲ್ಡ್ ವೈಡ್ ವೆಬ್, ಭಾರತ ಕೇಂದ್ರಿತ |
Activity | ಸ್ಕೆಡ್ಯೂಲ್ ನೋಡಿ (ಯೋಜಿಸಲಾಗುವುದು) |
Organised by | A2K |
People | ಸಲಹೆಗಾರರು: ತನ್ವೀರ್ ಹಸನ್ |
ಸಂಪರ್ಕಕ್ಕಾಗಿ, ದಯವಿಟ್ಟು ಚರ್ಚೆ ಪುಟದಲ್ಲಿ ಅಥವಾ ಇಮೇಲ್: wmwmcis-india.org ಗೆ ಪೋಸ್ಟ್ ಮಾಡಿ |
ಈ ಕಾರ್ಯಕ್ರಮ ಪುಟ, ಅದರ ಉಪಪುಟಗಳು ಮತ್ತು ಸಂಬಂಧಿತ ಬರವಣಿಗೆ ಇತ್ಯಾದಿಗಳು ಕಲಿಕೆ ಮತ್ತು ಮೌಲ್ಯಮಾಪನ ಶಬ್ದಕೋಶ ದಲ್ಲಿ ಉಲ್ಲೇಖಿಸಲಾದ ನಿಯಮಗಳು ಮತ್ತು ನುಡಿಗಟ್ಟುಗಳನ್ನು ಅನುಸರಿಸುತ್ತದೆ.
ವಿಕಿಮೀಡಿಯಾ ವಿಕಿಮೀಟ್ ಇಂಡಿಯಾ ೨೦೨೧ [1]ಎನ್ನುವುದು A2K ವತಿಯಿಂದ ಆಯೋಜಿಸಲಾದ ಆನ್‌ಲೈನ್ ವಿಕಿ-ಈವೆಂಟ್ ಆಗಿದ್ದು, ೧೯ ರಿಂದ ೨೧ ಫೆಬ್ರವರಿ ೨೦೨೧ ರವರೆಗೆ ಅಂತರರಾಷ್ಟ್ರೀಯ ಮಾತೃಭಾಷಾ ದಿನದ ಸಂದರ್ಭದಲ್ಲಿ ಇದನ್ನು ನಡೆಸಲಾಗುವುದು.ಇದು ಆನ್‌ಲೈನ್ ಕಾರ್ಯಾಗಾರಗಳು, ಪ್ರಸ್ತುತಿಗಳು ಮತ್ತು ಚರ್ಚೆಗಳು ಮುಂತಾದ ವಿಭಿನ್ನ ಘಟಕಗಳನ್ನು ಹೊಂದಿರುವ ಸಂಪೂರ್ಣ ಆನ್‌ಲೈನ್ ವಿಕಿ-ಈವೆಂಟ್ ಆಗಿರುತ್ತದೆ. (ನಿಖರವಾದ ವೇಳಾಪಟ್ಟಿಯನ್ನು ಕ್ರಮೇಣವಾಗಿ ಸಿದ್ಧಪಡಿಸಬೇಕಾಗಿದ್ದು ಈ ಕಾರ್ಯಕ್ರಮವು ದಿನಾಂಕವನ್ನು ಒಂದು ತಿಂಗಳ ಮೊದಲು ಪ್ರಸ್ತುತಪಡಿಸಲಾಗುತ್ತದೆ.) ಈ ಕಾರ್ಯಕ್ರಮವು ಹೆಚ್ಚಾಗಿ ವಿವಿಧ ಭಾರತೀಯ ವಿಕಿಮೀಡಿಯಾ ಯೋಜನೆಗಳ ಮೇಲೆ ಕೇಂದ್ರೀಕರಿಸಲಾಗುತ್ತದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಭಾಗವಹಿಸಲಿದ್ದಾರೆ. ಆದಾಗ್ಯೂ, ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆಯನ್ನು ಯಾವುದೇ ನಿರ್ದಿಷ್ಟ ದೇಶಕ್ಕೆ ಸೀಮಿತಗೊಳಿಸಲಾಗಿಲ್ಲ.
ಉದ್ದೇಶಗಳು
ವಿಕಿಮೀಡಿಯ ವಿಕಿಮೀಟ್‌ನ ಉದ್ದೇಶಗಳು ಹೀಗಿವೆ:
- ಭಾರತದಲ್ಲಿ ಮತ್ತು ಜಾಗತಿಕವಾಗಿ ವಿಕಿಮೀಡಿಯನ್ನರ ಆನ್-ವಿಕಿ ಕೆಲಸ ಮತ್ತು ಸಾಧನೆಗಳನ್ನು ಆಚರಿಸಿಲು.
- ಉಪಕರಣಗಳು, ಗ್ಯಾಜೆಟ್‌ಗಳು, ಸಂಪಾದನೆ, ಸುಧಾರಿತ ಸಂಪಾದನೆ ಇತ್ಯಾದಿಗಳಲ್ಲಿ ವಿಕಿ-ಕಲಿಕೆ ಮತ್ತು ಕೌಶಲ್ಯ-ಹಂಚಿಕೆಗಾಗಿ ಆನ್‌ಲೈನ್ ವೇದಿಕೆಯನ್ನು ಒದಗಿಸುವುದು.
- ವಿವಿಧ ವಿಷಯಗಳ ಕುರಿತು ಅಂತರ-ಸಮುದಾಯ ಚರ್ಚೆ ಮತ್ತು ಪರಸ್ಪರ ಕ್ರಿಯೆಯನ್ನು ಬೆಂಬಲಿಸುವುದು.
- ಅಬ್ಸ್ಟ್ರಾಕ್ಟ್ ವಿಕಿಪೀಡಿಯಾ, ವಿಕಿಮೀಡಿಯಾ ಕಾರ್ಯತಂತ್ರ 2030 ( ಇವು ಎರಡು ಉದಾಹರಣೆಯ ವಿಷಯಗಳು )
- ಆನ್‌ಲೈನ್ ತರಬೇತಿ / ವಿಕಿ-ಈವೆಂಟ್‌ನ ಮಾಧ್ಯಮವನ್ನು ಅನ್ವೇಷಿಸಿ ಮತ್ತು ಭವಿಷ್ಯದ ಬಳಕೆಗಾಗಿ ವಿವರಗಳೊಂದಿಗೆ ಕಲಿಕೆಗಳನ್ನು ದಾಖಲಿಸಿಕೊಳ್ಳುವುದು.
ಯಾಕೆ
ವಿಕಿಮೀಡಿಯಾ ವಿಕಿಮೀಟ್ ೨೦೨೧ ಭಾರತದಲ್ಲಿನ ವಿಕಿಮೀಡಿಯನ್ನರು ಮತ್ತು ವಿಕಿಮೀಡಿಯಾ ಯೋಜನೆಗಳಲ್ಲಿ ಭಾರತೀಯ ವಿಷಯದಲ್ಲಿ ಕೆಲಸ ಮಾಡುವ ಅಥವಾ ಆಸಕ್ತಿ ಹೊಂದಿರುವ ವಿಕಿಮೀಡಿಯನ್ನರಿಗೆ ಆನ್‌ಲೈನ್ ವೇದಿಕೆಯನ್ನು ಒದಗಿಸಲು ಪ್ರಯತ್ನಿಸುತ್ತದೆ.
ವರ್ಷಗಳಲ್ಲಿ, ಭಾರತದಲ್ಲಿ ವಿಕಿಮೀಡಿಯನ್ನರು ನಡೆಸಿದ ಹಲವಾರು ಪ್ರಮುಖ ವಿಕಿ ಈವೆಂಟ್ ಗಳನ್ನು ನಾವು ನೋಡಿದ್ದೇವೆ. Train the Trainer, Media Wiki Training, Advanced Wiki Training ಮತ್ತು ವಿಕಿಡಾಟಾ, ವಿಕಿಸೋರ್ಸ್ ನಂತಹ ಆಫ್ ಲೈನ್ ಕಾನ್ಫರೆನ್ಸ್ ಮತ್ತು ತರಬೇತಿ ಕಾರ್ಯಗಾರ ಕಾರ್ಯಕ್ರಮಗಳನ್ನು A2K ಆಯೋಜಿಸಿ ಉತ್ತೇಜಿಸಿದೆ.
ನಾವು ಕಳೆದ ಒಂದು ವರ್ಷದಿಂದ ಕ್ರಮೇಣ ಆನ್‌ಲೈನ್ ತರಬೇತಿ ಮತ್ತು ಕಾರ್ಯಾಗಾರಗಳತ್ತ ಗಮನ ಹರಿಸುತ್ತಿದ್ದೇವೆ. COVID-19 ಸಾಂಕ್ರಾಮಿಕ ಮತ್ತು ಅದರ ಪರಿಣಾಮವಾಗಿ ಸಂಬಂಧಿಸಿದ ನಿರ್ಬಂಧಗಳು ಈ ಬದಲಾವಣೆಗೆ ಒಂದು ಕಾರಣವಾಗಿದ್ದರೂ, ಇಂತಹ ಘಟನೆಯನ್ನು ನಡೆಸಲು ಇದು ಒಂದೇ ಕಾರಣವಲ್ಲ. ವಿಕಿಮೀಡಿಯಾ ವಿಕಿಮೀಟ್ ಮೂಲಕ ನಾವು ಆನ್‌ಲೈನ್ ಕಲಿಕೆ / ಅಭಿನಂದನೆಗಳು / ಮೀಟಿಂಗ್ ಇನ್ನಷ್ಟು ಅನ್ವೇಷಣೆಯನ್ನು ಮಾಡಲು ಬಯಸುತ್ತೇವೆ.
ವೇಳಾಪಟ್ಟಿ
ಅಡಿಟಿಪ್ಪಣಿಗಳು
- ↑ May be referred to "WMWM", "WMWMI" or "Wikimeet" as well.